User talk:KRLingappa
ಕೆ ಆರ್ ಲಿಂಗಪ್ಪ ಜಾನಪದ ಕೋಗಿಲೆ
[edit]ಕೆ. ಆರ್ ಲಿಂಗಪ್ಪನವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಶಿವನಿ ಹೋಬಳಿ ಕಲ್ಲೇನಹಳ್ಳಿ ಯಲ್ಲಿ 08-06-1922 ಜನಿಸಿದರು. ತಂದೆ ಪಟೇಲ್ ರಂಗಪ್ಪ ಹಾಗೂ ತಾಯಿ ಬಸಮ್ಮ ರವರ ಹಿರಿಯ ಪುತ್ರನಾಗಿ ಜನಿಸಿದರು ಕಡುಬಡತನದಲ್ಲಿಯೇ ಓದನ್ನು ಪ್ರಾರಂಭಿಸಿದರು ಅಜ್ಜಂಪುರ ಹಾಗೂ ದಾವಣಗೆರೆಯಲ್ಲಿ ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಬಿಎ ಪದವಿ ಬೆಳಗಾವಿಯಲ್ಲಿ ಬದುಕಿಗಾಗಿ ಕೆಲಕಾಲ ಆಹಾರ ಇಲಾಖೆಯಲ್ಲಿ ಗುಮಾಸ್ತರಾಗಿ ವಯಸ್ಕರ ಶಿಕ್ಷಣ ಸಮಿತಿಯ ಬೆಳಕು ಪತ್ರಿಕೆಯ ಸಂಪಾದಕರಾಗಿ ನಂತರ ವಕೀಲರಾಗಿ ತರೀಕೆರೆಯಲ್ಲಿ ಜೀವನ ಪ್ರಾರಂಭಿಸಿದರು
ಜಾನಪದ ಸಾಹಿತ್ಯ ರತ್ನ
ಕಾಯಕಕ್ಕೆ ವಕೀಲಿ ವೃತ್ತಿಯನ್ನು ಕೈಗೊಂಡಿರುವ ಇವರು ಪ್ರವೃತ್ತಿಯಾದ ಜನಪದ ಸಾಹಿತ್ಯದ ಪ್ರಚಾರಕ ರಾಗಿ ಊರೂರು ಅಲೆದಿದ್ದಾರೆ ಜನಪದದ ಬಗೆಗೆ ಇವರಿರುವ ಒಲವು ಎಷ್ಟೇ ಹೇಳಿದರೂ ಕಮ್ಮಿ. ಇದನ್ನು ಮೊದಲೇ ಗುರುತಿಸಿ ಮನಗಂಡ ಚಿತ್ರದುರ್ಗದ ಶ್ರೀಮಾನ್ ಮಹಾರಾಜ ನಿರಂಜನ ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾ ಸನ್ನಿಧಿಯವರು ಕೆ ಆರ್ ಲಿಂಗಪ್ಪನವರಿಗೆ ಜನಪದ ಸಾಹಿತ್ಯ ರತ್ನ ಎಂಬ ಬಿರುದನ್ನು ದಯಪಾಲಿಸಿರುವುದು
ಚಿಕ್ಕಮಗಳೂರು ಜಿಲ್ಲೆಯ ಹೆಮ್ಮೆಯ ಸುಪುತ್ರ
ಸಾಂಸ್ಕೃತಿಕವಾಗಿ ಕನ್ನಡನಾಡಿಗೆ ಚಿಕ್ಕಮಗಳೂರು ಬಹುದೊಡ್ಡ ಕಾಣಿಕೆ ನೀಡಿದೆ ಕೆ.ಆರ್ ಲಿಂಗಪ್ಪ ಶ್ರೀಮತಿ ಬಿ.ಕೆ ಸುಮಿತ್ರ ಗೋ ರು ಚನ್ನಬಸಪ್ಪ ಈ ಜಿಲ್ಲೆಯ ಸಾಂಸ್ಕೃತಿಕ ಲೋಕದ ತಾರೆಗಳು ವೀರಗಾಸೆ ಕಲೆ ರಾಷ್ಟ್ರ ವ್ಯಾಪಿ ಪಡೆದಿದ್ದು ಪಡೆದಿದೆ
ಸಾಹಿತ್ಯ ಸಮ್ಮೇಳನದಲ್ಲಿ ಲಿಂಗಪ್ಪನವರು ಮಾಡಿದ ಭಾಷಣದ ವೈಶಿಷ್ಟ್ಯತೆ
1981ರಲ್ಲಿ ಚಿಕ್ಕಮಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಲಿಂಗಪ್ಪನವರು ಮಾಡಿದ ಭಾಷಣದ ವಿಷಯಗಳು ಇಂದಿಗೂ ಪ್ರಸ್ತುತವಾಗಿದೆ ಉದಾಹರಣೆ ಬೆವರ ಹನಿ, ಸಹಜದನಿ,ಬೆರಗು ಬೆಕ್ಕಸ ಇನ್ನೂ ಹಲವಾರು
ಕೆ ಆರ್ ಲಿಂಗಪ್ಪನವರು ಸಂಗ್ರಹ ಮತ್ತು ಸಂಪಾದನೆ
ಮಾನವಮಿ ಪದಗಳು1949ರಲ್ಲಿ ಪ್ರಕಟವಾದ ಈ ಕೃತಿ ಜನಪದ ಗೀತೆಗಳ ಸಂಕಲನವಾಗಿದೆ ಈ ಸಂಕಲದಲ್ಲಿ ಗಣೇಶ ಪದ ಹಲಗೆ ತೊಳೆಯುವ ಪದ ಗಂಗಾದೇವಿಯ ಪದ ಬನ್ನಿ ಮಹಾಕಾಳಿ, ಗೌಡರ ಪದ,ಹರಕೆಯ ಪದ ಬಸವಣ್ಣನವರ ಪದ ಇನ್ನು ಹಲವಾರು
ಕೆ ಆರ್ ಲಿಂಗಪ್ಪನವರ ಸಾಧನೆಗೆ ರಾಜ್ಯಪಾಲರಾದ ಶ್ರೀ ಉಮಾಶಂಕರ್ ದೀಕ್ಷಿತ್ ಇವರಿಂದ ಕೆ ಆರ್ ಲಿಂಗಪ್ಪ ರಾಜ್ಯ ಪ್ರಶಸ್ತಿ ಸ್ವೀಕರಿಸಿದರು.
1967 ರಲ್ಲಿ ಪ್ರಥಮ ಕನ್ನಡ ಜಾನಪದ ಸಮ್ಮೇಳನದಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು
1994ರಲ್ಲಿ ತರೀಕೆರೆ ನಗರಕ್ಕೆ ವರ ನಟ ಡಾ|| ರಾಜಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ 20 ನಿಮಿಷಕ್ಕೂ ಹೆಚ್ಚು ಕಾಲ ಅವರೊಡನೆ ಕಳೆದ ಸಮಯವನ್ನು ಮೆಲುಕು ಹಾಕಿದರು.
ಲಿಂಗಪ್ಪನವರ ಅಮೆರಿಕ ಪ್ರವಾಸ
1994 ನವೆಂಬರ್ 20ರಂದು ಲಿಂಗಪ್ಪನವರು ಬೆಂಗಳೂರಿನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದರು
ಲಿಂಗಪ್ಪನವರ ರಾಜಕೀಯ ಪ್ರವೇಶ
1970ರ ದಶಕದಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದರು.
ಲಿಂಗಪ್ಪನವರ ಕಂಚಿನ ಕಂಠ
ಕೆ ಆರ್ ಲಿಂಗಪ್ಪನವರದು ಕಂಚಿನ ಕಂಠ ಜನಪದ ಶಾರದೆ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಳು ಇವರ ಧ್ವನಿ ಕಿವಿಗೆ ಇಂಪಾಗಿ ಸೊಂಪಾಗಿ ಕೇಳುತ್ತಿತ್ತು
ಲಿಂಗಪ್ಪನವರ ಮಾನವೀಯ ಗುಣಗಳು
ನಿಂಗಪ್ಪನವರಲ್ಲಿ ದೇವರಲ್ಲಿ ಭಕ್ತಿ ಇದ್ದಂತೆ ವೈಚಾರಿಕ ಪ್ರಜ್ಞೆಯು ಜಾಗೃತವಾಗಿತ್ತು ಮೂಡನಂಬಿಕೆಗಳು ಮತ್ತು ಕಂದಾಚಾರಗಳನ್ನು ನಂಬುತ್ತಿರಲಿಲ್ಲ
ಲಿಂಗಪ್ಪನವರ ಪತ್ನಿ ಲಿಂಗೈಕ್ಯರಾದಾಗ
1993 ರಂದು ನಿಂಗಪ್ಪನವರ ಧರ್ಮಪತ್ನಿ ಲಿಂಗೈಕ್ಯರಾದರು ಆಗ ಲಿಂಗಪ್ಪನವರು ಮನೆಯ ಮಹಾಲಕ್ಷ್ಮಿ ಹೋದಂತೆ ಮರುಗಿದರು
ಕೆ ಆರ್ ಲಿಂಗಪ್ಪನವರ ಕೊನೆಯ ದಿನಗಳು
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಡಾ|| ಶಂಕರ್ ಹೃದಯ ತಜ್ಞರು ಚಿಕಿತ್ಸೆ ಪಡೆಯಲು ಬೈಪಾಸ್ ಶಸ್ತ್ರಚಿಕಿತ್ಸೆಗೆ ಅವರು ದೇಹ ಪ್ರಕೃತಿ ಸರಿಯಾಗುವುದಿಲ್ಲ ಎಂದು ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾಕ್ಟರ್ ಪ್ರಭುದೇವ್ ಹೇಳಿದರಂತೆ, ಅದರಂತೆ ಅಂದಿನಿಂದ ಒಂದು ವರ್ಷ ಕಾಲ ವೈದ್ಯ ಚಿಕಿತ್ಸೆ ಮಾಡುತ್ತಿದ್ದರಂತೆ ಆದರೂ ದಿನಾಂಕ 11-05-2000 ರಂದು ಅವರ ಮಗನಾದ ಡಾ. ಪಂಚಾಕ್ಷರಿ ಅವರ ಮನೆಯಲ್ಲಿ ನಿಧನರಾದರು KRLingappa (talk) 06:04, 4 December 2022 (UTC)