User:Soundarya K N
ಶ್ರವಣಬೆಳಗೊಳ (Shravanabelagola) ಹಾಸನ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ, ಪ್ರವಾಸಿ ತಾಣವಾಗಿದೆ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೭.೮೮ ಮೀಟರ್ ) ಅಡಿ ಎತ್ತರದ ಬಾಹುಬಲಿಯ ಮೂರ್ತಿಯಿದೆ. ಜೈನ ಧಾರ್ಮಿಕ ಕೇಂದ್ರವಾಗಿದೆ. ನಾಲ್ಕನೇ ರಾಚಮಲ್ಲನ ಮಂತ್ರಿಯಾಗಿದ್ದ "ಚಾವುಂಡರಯ"ಇದನ್ನು ನಿರ್ಮಿಸಿದನು,ಮತ್ತು "ಚಾವುಂಡರಾಯ ಪುರಾಣ" ರಚಿಸಿದನು.
ಪರಿವಿಡಿ
೧ ಗೊಮ್ಮಟೇಶ್ವರ
೨ ಪೀಠಿಕೆ ಮತ್ತು ಇತಿಹಾಸ
೩ ಸೌಲಭ್ಯ: ಪರಿಚಯ
೪ ತಲುಪುವ ದಾರಿ
೫ ನೋಡಿ
೬ ಉಲ್ಲೇಖ
ಗೊಮ್ಮಟೇಶ್ವರ
ಜೈನಧರ್ಮದಲ್ಲಿ ಕೇಳಿ ಬರುವ ಪ್ರಸಿದ್ಧವಾದ ಹೆಸರು ಗೊಮ್ಮಟೇಶ್ವರ. ಚಾವುoಡರಾಯನು ಶ್ರವಣ ಬೆಳಗೊಳದಲ್ಲಿ ಕೆತ್ತಿಸಿದ 58 ಅಡಿ 8 ಇಂಚು ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ಇದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಮಸ್ತಾಭಿಶೇಕವನ್ನು ನೆರವೆರಿಸಲಾಗುತ್ತದೆ.ಕೊನೆಯಬಾರಿ 2018 ಫೆಬ್ರುವರಿ 8 ರಂದು ನಡೆದಿತ್ತು,ಮುಂದೆ 2030 ರಲ್ಲಿ ನಡೆಯಲಿದೆ.
ಪೀಠಿಕೆ ಮತ್ತು ಇತಿಹಾಸ
ಗೊಮ್ಮಟೇಶ್ವರ ಏಷ್ಯ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವು ಬೆಂಗಳೂರಿನಿಂದ 148 ಕಿ.ಮೀಗಳ ದೂರದಲ್ಲಿದೆ. ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. ಈ ಶಿಲ್ಪಿಯು ವಿಶ್ವಕರ್ಮ ವರ್ಗಕ್ಕೆ ಸೆರಿದವನಾಗಿದ್ದು, ಪ್ರಸಿದ್ಧ ಶಿಲ್ಪಿ ಜಕಣಚಾರಿಯ ಶಿಷ್ಯನೆ೦ದು ಹೆಳುತ್ತಾರೆ'. ಮತ್ತೊಂದೆಡೆ ತುಳುನಾಡಿನ ಪ್ರಸಿದ್ದ ಶಿಲ್ಪಿ "ವೀರ ಶಂಭು ಕಲ್ಕುಡ "ಕೆತ್ತಿದನೆಂದು ಹೇಳಲ್ಪಡುತ್ತದೆ.(ಕೋಟಿ ಚೆನ್ನಯ:-ಡಾ| ವಾಮನ ನಂದಾವರ ಪುಟ219) ವಿಂಧ್ಯಗಿರಿಯ ಬೆಟ್ಟದ ಮೇಲಕ್ಕೆ ಹೋಗಲು ಸುಮಾರು ೭೦೦ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹತ್ತಲಾಗದವರಿಗೆ ಡೋಲಿ ವ್ಯವಸ್ಥೆಯೂ ಲಭ್ಯವಿದೆ. ವಿಂಧ್ಯಗಿರಿಯ ಎದುರಿನಲ್ಲೇ ಚಿಕ್ಕಬೆಟ್ಟ ಅಥವಾ ಚಂದ್ರಗಿರಿ ಬೆಟ್ಟವಿದ್ದು ಇಲ್ಲೂ ಸಹ ಪ್ರಾಚೀನ ಬಸದಿಗಳಿವೆ.
ವಿಂಧ್ಯಗಿರಿ ಮೇಲಿನ ವದೆಗಲ್ ಬಸದಿ