User:Anandaswamy.B.M
ಋಗ್ವೇದದಲ್ಲಿ ವೀರಶೈವ ಧರ್ಮ
ಋಗ್ವೇದದ ಕಾಲದಲ್ಲಿ ವೀರಶೈವರ ಲಕ್ಷಣಗಳು ಅಡಕವಾಗಿದ್ದುದನ್ನು ಈ ಕೆಳಗಿನ ಶ್ಲೋಕಗಳು ನಿರೂಪಣೆ ಗೊಳಿಸುತ್ತಿವೆ .
" ಆಯಂ ಮೇ ಹಸೋ ಭಗವಾನಯಂ ಮೇ ಭಗವತ್ತರ:
ಅಯಂ ಮೇ ವಿಶ್ವಭೇಷಜೋsಯಂ ಶಿವಾಭಿಮರ್ಶನ: "
ಋಗ್ವೇದದ ಮಂಡಲ ೧೦ , ಸೂಕ್ತ ೬೦ , ಮಂತ್ರ ಸಂಖ್ಯೆ ೧೨
ಆಯಂ ಮಾತಾsಯಂ ಪಿತಾಯಂ ಜೀವತುರಾಗಮತ ಇದಂ ತವ ಪ್ರಸರ್ಪಣo ಸುಬಂಧವೇಹಿ ನಿರಿಹೀ ”
ಋಗ್ವೇದದ ಮಂಡಲ ೧೦ , ಸೂಕ್ತ ೬೦ , ಮಂತ್ರ ಸಂಖ್ಯೆ ೬ ಈ ಮೇಲಿನ ಶ್ಲೋಕದ ಒಟ್ಟಭಿಪ್ರಾಯವು ಇಷ್ಟಲಿಂಗವನ್ನು ವಾಮಹಸ್ತದಲ್ಲಿಟ್ಟು ಅದರ ಆಹಂಗ್ರಹೋಪಾಸನೆಯಲ್ಲಿ ನಿರತನಾದಾಗ ಲಿಂಗಾಂಗಸಾಮರಸ್ಯದ ಶಿವಯೋಗದಲ್ಲಿ ಶಿವನ ದರ್ಶನದ ಜೊತೆಗೆ ; ಆ ಇಷ್ಟಲಿಂಗವನ್ನೇ ಏಕಾಗ್ರಚಿತ್ತದ ತದೇಕ ದೃಷ್ಟಿಯಿಂದ ನೋಡುತ್ತಿದ್ದಾಗ ಭಕ್ತನು ( ಶಿವಯೋಗದಲ್ಲಿ ನಿರತನಾದ ಲಿಂಗಧಾರಿ ) , ತಂದೆ ನೀನು , ತಾಯಿ ನೀನು , ನನ್ನೆಲ್ಲಾ ಬಳಗವೂ ನೀನೇ ಎಂದು ಇಷ್ಟಲಿಂಗದಲ್ಲಿ ಸಮರಸಭಾವ ಹೊಂದುವ ಲಿಂಗಾಂಗಸಂಗಿ ಭಕ್ತನ ಪರಾಕಾಷ್ಟೆಯ ಅತಿ ಉನ್ನತಸ್ತರದ ಹಂತಕ್ಕೇರಿದ ಅವಸ್ಥೆಯನ್ನು ಸವಿವರವಾಗಿ ಋಗ್ವೇದ ವಿವರಿಸುತ್ತಿದೆ .
ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾಾತಾಣಿ ಪರ್ಯೇಷಿ ವಿಶ್ವಶಃ | ಆತಪ್ತತನುರ್ದಶದಾಮೋಶುತೇ | ಶೃತಾಸ ಇದ್ದಹಂಸ್ತತ್ ಸಮಾಶತ.
ಈ ಮೇಲಿನ ಋಗ್ವೇದದ ಮಂತ್ರವಾದರೂ ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಆರ್ಥಾತ್ , ಸಿದ್ಧಾಂತಾಗಮದಲ್ಲಿ ತಲ್ಲಿಂಗಂ ಬ್ರಹ್ಮಶಾಸ್ವತಮ್ " , ಉತ್ತರವಾತುಲ ಆಗಮದಲ್ಲಿ ' ಲಿಂಗಂ ಬ್ರಹ್ಮತಿ ನಿಶ್ಚಿತಮ್ , ಲಿಂಗಪುರಾಣದಲ್ಲಿ ' ಬ್ರಹ್ಮೇತಿ ಲಿಂಗಮಾಖ್ಯಾತ೦ , ಕ್ರಿಯಾಸಾರದಲ್ಲಿ ' ಲಿಂಗಂಬ್ರಷ್ಟೇತಿ ಕೀರ್ತಿತಂ ' , ಎಂದಿದೆ . ಮೋಕ್ಷವನ್ನು ಬಯಸುವವರು ಬ್ರಹ್ಮನನ್ನೆ ಲಿಂಗವೆಂದು ತಿಳಿಯಬೇಕೆಂಬ ವಿವರಣೆಯಿದೆ . ವೇದಗಳಲ್ಲಿಯೇ ಪ್ರಾಚೀನವಾದ ಋಗ್ವೇದದಲೢ ವೀರಶೈವದ ವಿಚಾರಗಳು ಪ್ರತಿಪಾದಿತವಾಗಿವೆಯೆಂದರೆ ಇದರ ತತ್ವ ಸಿದ್ಧಾಂತಗಳು ಪ್ರಾಚೀನ ಕಾಲದಲ್ಲಿಯೇ ಮೊಳಕೆಯೊಡೆದು ಕಾಲಕಾಲಕ್ಕೆ ಪರಿಷ್ಕರಣಗೊಳ್ಳುತ್ತಾ ಉನ್ನತ ವಿಚಾರಗಳನ್ನು ಅಳವಡಿಸಿಕೊಂಡ ವಿಶ್ವಧರ್ಮವಾಗಿ , ಮಾನವ ಧರ್ಮವಾಗಿ ಇಂದು ಸದೃಢವಾಗಿ ನೆಲೆನಿಂತಿದೆ .