User:ಗಾಯತ್ರಿ ಆರ್ 88
Appearance
ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು ಕಿವುಡರ ಸಂಘದಲ್ಲಿ ಶಬ್ದ ದಂತಿರಬೇಕು ದೊಡ್ಡವರ ಗುಂಪಿನಲ್ಲಿ ದೊಡ್ಡದಿರಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು
ಕನಕದಾಸರು ಹರಿದಾಸ ಪಂಥದ ಪ್ರಮುಖ ಕೀರ್ತನಕಾರ, ಕವಿ, ದಾರ್ಶನಿಕ ಮತ್ತು ಸಮಾಜ ಸುಧಾರಕ. ಹರಿದಾಸ ಪಂಥದ ಮುಖ್ಯ ತತ್ವಗಳಾದ ಭಕ್ತಿ, ಜ್ಞಾನ, ವೈರಾಗ್ಯ, ಕೃಷ್ಣ ಲೀಲೆ, ದಶಾವತಾರ, ದಿವ್ಯ ದರ್ಶನ, ಅನುಭವಗಳು ಅವರ ಭಕ್ತಿಯ ಅಭಿವ್ಯಕ್ತಿಗಳ ಆದರೆ ಜಾತಿ ಸಮಾನತೆ, ಸಾಮಾಜಿಕ ವಿಡಂಬನೆ, ನೀತಿ ಬೋಧನೆ, ವೈಚಾರಿಕತೆ ಪ್ರತಿಭಟನೆ ಮತ್ತು ಬಂಡಾಯಗಳು ಅವರ ಸಾಮಾಜಿಕ ಅವಿ ಭಕ್ತಿಯ ನೆಲೆಗಳಾಗಿವೆ. ಕನಕದಾಸರು ಹುಟ್ಟಿನಿಂದ ಕುರುಬರ ಆದರೂ ಸ್ಥಾನಮಾನಗಳಿಂದ ಶ್ರೀಮಂತರಾಗಿ ಬದುಕಿದವರು. ಕ್ರಿಸ್ತಶಕ ಸಾವಿರ 509 ರಲ್ಲಿ ಅಂದರೆ 16ನೇ ಶತಮಾನದಲ್ಲಿ ಬಾಡ ಗ್ರಾಮದ ವೀರಪ್ಪ ನಾಯಕ ಮತ್ತು ಬಚ್ಚಮ್ಮ ದಂಪತಿಗಳಿಗೆ ತಿರುಪತಿ ವೆಂಕಟರಮಣನ ಕೃಪೆಯಿಂದ ಹುಟ್ಟಿದ ಮಗನಿಗೆ ಹೆತ್ತವರು ಇಟ್ಟ ಹೆಸರು ತಿಮ್ಮಪ್ಪನಾಯಕ. ಬಾಲ್ಯದಲ್ಲಿಯೇ ಅಕ್ಷರಭ್ಯಾಸ ವ್ಯಾಕರಣ ತರ್ಕ ಮೀಮಾಂಸೆ ಸಾಹಿತ್ಯ ಇವುಗಳನ್ನು ಶ್ರೀನಿವಾಸಾಚಾರ್ಯರ ದಲಿತರು ಜೊತೆಗೆ ಕತ್ತಿವರಸೆ ಕುದುರೆ ಸವಾರಿಯನ್ನು ಕಲಿತಿದ್ದರು.